Avsnittsbeskrivning
"ಕಾಯಿಲೆಗಿಂತ ಅದರ ಬಗ್ಗೆ ಇರುವ ಮೌನವೇ ಹೆಚ್ಚು ಅಪಾಯಕಾರಿ." ಪೈಲ್ಸ್, ಫಿಶರ್ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳ ಬಗ್ಗೆ ಮಾತನಾಡಲು ಇಂದಿಗೂ ನಮ್ಮ ಸಮಾಜದಲ್ಲಿ ಒಂದು ರೀತಿಯ ಮುಜುಗರವಿದೆ. ಆದರೆ ಈ ಮುಜುಗರವೇ ಪ್ರಾಣಕ್ಕೆ ಸಂಚಕಾರ ತರಬಲ್ಲದು ಎಂಬ ಸತ್ಯ ನಮಗೆ ಗೊತ್ತೇ? TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ಈ ವಿಷಯದ ಕುರಿತು ಜನರಲ್ಲಿ ಅರಿವು ಮೂಡಿಸಲು ನಮ್ಮ ಜೊತೆಗಿದ್ದಾರೆ ಖ್ಯಾತ ಕೊಲೊರೆಕ್ಟಲ್ ಶಸ್ತ್ರಚಿಕಿತ್ಸಕ ಡಾ. ಪರಮೇಶ್ವರ ಸಿ.ಎಂ.
೨೫ ವರ್ಷಗಳ ಸುದೀರ್ಘ ಅನುಭವ ಮತ್ತು ಬರೋಬ್ಬರಿ ೫೦,೦೦೦ಕ್ಕೂ ಹೆಚ್ಚು ಸರ್ಜರಿಗಳನ್ನು ಮಾಡಿರುವ ಡಾ. ಪರಮೇಶ್ವರ ಅವರು, SMILES ಸಂಸ್ಥೆಯ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ನಡೆಸುತ್ತಿರುವ ಮೌನ ಕ್ರಾಂತಿಯ ಬಗ್ಗೆ ಮಾತನಾಡಿದ್ದಾರೆ. ಆಧುನಿಕ ಲೇಸರ್ ಚಿಕಿತ್ಸೆಯನ್ನು ಸಾಮಾನ್ಯ ಮನುಷ್ಯನಿಗೆ…
Webbplats: podcasters.spotify.com
